ಹೆದರಬೇಡಿರಿ, ನಿಮಗೋಸ್ಕರ ರಕ್ಷಕನು ಹುಟ್ಟಿದ್ದಾನೆ!
ಸುಮಾರು ೨೦00 ವರ್ಷಗಳ ಹಿಂದೆ, ಈ ಲೋಕದಲ್ಲಿ ಒಂದು ದೊಡ್ಡ ಅತಿಶಯವಾದ ಕಾರ್ಯ ನಡೆಯಿತು. ಹೌದು! ಈ ಲೋಕವನ್ನೇ ಸೃಷ್ಟಿಮಾಡಿ, ಕಾದು ಬರುವ ದೇವರು, ನಮ್ಮಂತೆ ಒಬ್ಬ ಮನುಜನಾಗಿ ಈ ಲೋಕದಲ್ಲಿ ಹುಟ್ಟಿದನು. ಕಾಣದ ದೇವರು, ನಮ್ಮಂತೆ ಒಬ್ಬ ಮಾನವನಾಗಿ ಜನಿಸಿದ್ದು ಅತಿಶಯವಲ್ಲವೇ?
ಇದನ್ನೇ ಇಂದು ಇಡೀ ವಿಶ್ವವೇ, ‘ಕ್ರಿಸ್‌ಮಸ್ ದಿನ ಎಂಬುದಾಗಿ ಆಚರಿಸುತ್ತಾರೆ.
ದೇವರು, ಏಕೆ ಮನುಷ್ಯನಾಗಿ ಜನಿಸಬೇಕು? ಇಸ್ರೇಲ್ ದೇಶದ ‘ಬೆತ್ತೆಹೇಮ್’ ಎಂಬ ಚಿಕ್ಕ ಊರಿನಲ್ಲಿ ದೇವರು ಒಬ್ಬ ಮಾನವನಾಗಿ ಅವತರಿಸುವಲ್ಲಿ, ಆ ಸಂದೇಶವನ್ನು ದೇವ ದೂತರು ಲೋಕದ ಜನರಿಗೆ ಸಾರಿದರು.
‘ಈ ಹೊತ್ತು ನಿಮಗೋಸ್ಕರ ದಾವೀದನ ಊರಿನಲ್ಲಿ (ಬೆತ್ತೆಹೇಮ್‌ನಲ್ಲಿ) ಒಬ್ಬ ರಕ್ಷಕನು ಹುಟ್ಟಿದ್ದಾನೆ. ಇದನ್ನು ಓದುತ್ತಿರುವ ಸ್ನೇಹಿತರೇ, ನಿಮಗೋಸ್ಕರವೇ ದೇವರಾದ ಯೇಸು, ಮಾನವನಾಗಿ ಹುಟ್ಟಿದನು. ‘ನನಗೋಸ್ಕರವಾ?’ ಎಂದು ಆಶ್ಚರ್ಯಪಡಿತ್ತಿದ್ದೀರಾ? ಹೌದು! ನಿಮಗೋಸ್ತರವೇ! ನಿಮ್ಮನ್ನು ರಕ್ಷಿಸುವದಕ್ಕೋಸ್ಕರ, ಯೇಸು ರಕ್ಷಕನು ಹುಟ್ಟಿದನು!
ಏಕೆ?
ಪಾಪಗಳಲ್ಲಿಯೂ, ಪಾಪದ ಅಭ್ಯಾಸಗಳಲ್ಲಿಯೂ, ಮನದಲ್ಲಿಯೂ, ಕುಟುಂಬದಲ್ಲಿಯೂ, ಜೀವನದ ಎಲ್ಲಾ ಕಡೆಗಳಲ್ಲಿಯೂ ಸಮಾಧಾನವಿಲ್ಲದೆ ಬಳಲುವ ನಿಮ್ಮನ್ನು ಪಾಪದಿಂದ ರಕ್ಷಿಸಿ, ಪರಿಶುದ್ಧವಾದ ಜೀವನವನ್ನು ನಿಮಗೆ ಒದಗಿಸಿ ಕೊಡಲು ಯೇಸು ರಕ್ಷಕನು ಹುಟ್ಟಿದನು.
ರೋಗಗಳಲ್ಲಿ ಬಳಲಿ, ವೇದನೆಯಲ್ಲಿರುವ ನಿಮಗೆ ರೋಗದಿಂದ ರಕ್ಷಿಸಿ, ಹರ್ಷ ತುಂಬಿದ ಒಂದು ಜೀವನವನ್ನು ನಿಮಗೆ ಕೊಡುವದಕ್ಕೋಸ್ಕರವೇ ಯೇಸು ರಕ್ಷಕನು ಹುಟ್ಟಿದನು.
ಚಿಂತೆ, ಕಣ್ಣೀರು, ಬೇಡಿಕೆಗಳ ಮಧ್ಯದಲ್ಲಿ ಅಂಗಲಾಚಿರುವ ನಿಮ್ಮನ್ನು, ಬಾದೆಗಳಿಂದ ರಕ್ಷಿಸಿ,ಆಶೀರ್ವಾದವಾದ ಜೀವನವನ್ನು ಕೊಡುವದಕ್ಕಾಗಿಯೇ ಯೇಸು ರಕ್ಷಕನು ಹುಟ್ಟಿದನು.
‘ಯೇಸುವಿನ ರಕ್ತವು ಸಕಲಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ. (೧ ಯೋಹಾನ: ೧:೭) ನಿಮಗೋಸ್ಕರ ಹುಟ್ಟಿ, ನಿಮಗೋಸ್ಕರ ಸತ್ತು, ನಿಮಗೋಸ್ಕರ ಜೀವಂತವಾಗಿ ಎದ್ದ ಯೇಸು ಕ್ರಿಸ್ತನು, ಈಗ ನಿಮ್ಮನ್ನು ರಕ್ಷಿಸುವಂತೆ ನಿಮ್ಮ ಹತ್ತಿರವಾಗಿಯೇ ನಿಂತಿದ್ದಾನೆ.
ಈ ಯೇಸು ರಕ್ಷಕನನ್ನು ನಿಮ್ಮ ಮನದಲ್ಲಿ ಸ್ವೀಕಾರ ಮಾಡಿಕೊಳ್ಳುವೀರಾ?
‘ಯೇಸುವೇ, ನೀನು ನನಗಾಗಿ ಈ ಲೋಕದಲ್ಲಿ ಹುಟ್ಟಿ, ನನ್ನನ್ನು ರಕ್ಷಿಸುವದಕ್ಕಾಗಿಯೇ ಶಿಲುಬೆಯಲ್ಲಿ ಜೀವವನ್ನು
ಕೊಟ್ಟೇ ಎಂಬುದನ್ನು ನಾನು ನಂಬುತ್ತೇನೆ. ನಿಮ್ಮನ್ನು ನನ್ನ ಹೃದಯದಲ್ಲಿ ಸ್ವೀಕಾರಮಾಡಿಕೊಳ್ಳುತ್ತೇನೆ. ನನ್ನ ಪಾಪವನ್ನು ಕ್ಷಮಿಸಿ, ಆಶೀರ್ವಾದವಾದ ಜೀವನವನ್ನು ನನಗೆ ಕೊಡಿ ಎಂದು ಬೇಡಿಕೊಳ್ಳಿರಿ. ಯೇಸು ನಿಮ್ಮ ಮನದಲ್ಲಿ ಬರುವನು! ನಿಮ್ಮ ಬದುಕನ್ನು ಬದಲಾಯಿಸುವನು! ನಿಜವಾದ ಸಮಾಧಾನವನ್ನು ನಿಮಗೆ ಕೊಡುವನು!
ಈ ಯೇಸು ರಕ್ಷಕನನ್ನು ಕುರಿತು, ಇನ್ನೂ ಅಧಿಕವಾಗಿ ತಿಳಿದುಕೊಳ್ಳಲು ಬಯಸುವುದಾದರೆ, ನಮಗೆ ಬರೆಯಿರಿ. ಯೇಸು ಕ್ರಿಸ್ತನ ಜೀವನ ಚರಿತ್ರೆ ಅಡಗಿರುವ ಪುಸ್ತಕವನ್ನು ಉಚಿತವಾಗಿ ನಿಮಗೆ ಕಳುಹಿಸುತ್ತೇವೆ.
Most Popular topics
Peace it’s yours A man came to a psychiatric...
He come seeking He did a miracle! At the age of...
Why stress Today, it is rare to find carefree...